2 ಅರಸುಗಳು 16 : 1 (KNV)
ರೆಮಲ್ಯನ ಮಗನಾದ ಪೆಕಹನ ಆಳ್ವಿಕೆಯ ಹದಿನೇಳನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಯೋತಾಮನ ಮಗನಾದ ಆಹಾಜನು ಆಳಲು ಆರಂಭಿಸಿದನು.
2 ಅರಸುಗಳು 16 : 2 (KNV)
ಆಹಾಜನು ಆಳಲು ಆರಂಭಿ ಸಿದಾಗ ಇಪ್ಪತ್ತು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹದಿನಾರು ವರುಷ ಆಳಿದನು.
2 ಅರಸುಗಳು 16 : 3 (KNV)
ಅವನು ತನ್ನ ತಂದೆಯಾದ ದಾವೀದನ ಹಾಗೆ ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಒಳ್ಳೇಯದನ್ನು ಮಾಡದೆ ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು. ಇದಲ್ಲದೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯಜನಾಂಗಗಳ ಅಸಹ್ಯವಾದವುಗಳ ಪ್ರಕಾರ ಅವನು ತನ್ನ ಮಗನನ್ನು ಬೆಂಕಿ ತುಳಿಯ ಮಾಡಿದನು.
2 ಅರಸುಗಳು 16 : 4 (KNV)
ಇದಲ್ಲದೆ ಅವನು ಉನ್ನತ ಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಸಮರ್ಪಿಸಿದನು.
2 ಅರಸುಗಳು 16 : 5 (KNV)
ಅವನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀ ನನೂ ಇಸ್ರಾಯೇಲಿನ ಅರಸನಾದಂಥ ರೆಮಲ್ಯನ ಮಗನಾದ ಪೆಕಹನೂ ಯುದ್ಧಮಾಡಲು ಯೆರೂಸ ಲೇಮಿಗೆ ಬಂದು ಆಹಾಜನನ್ನು ಮುತ್ತಿಗೆ ಹಾಕಿದರು; ಆದರೆ ಅವನನ್ನು ಜಯಿಸಲಾರದೆ ಹೋದರು.
2 ಅರಸುಗಳು 16 : 6 (KNV)
ಅದೇ ವೇಳೆಯಲ್ಲಿ ಅರಾಮ್ಯರ ಅರಸನಾದ ರೆಚೀನನು ಏಲ ತನ್ನು ಅರಾಮಿಗೆ ತಿರಿಗಿ ಸೇರಿಸಿಕೊಂಡು ಏಲತಿನಿಂದ ಯೆಹೂದ್ಯರನ್ನು ಓಡಿಸಿಬಿಟ್ಟನು; ಅರಾಮ್ಯರು ಏಲತಿಗೆ ಬಂದು ಇಂದಿನವರೆಗೂ ಅಲ್ಲಿ ವಾಸ ಮಾಡುತ್ತಿದ್ದಾರೆ.
2 ಅರಸುಗಳು 16 : 7 (KNV)
ಆದರೆ ಆಹಾಜನು ಅಶ್ಶೂರಿನ ಅರಸನಾದ ತಿಗ್ಲತ್ಪಿಲೇ ಸೆರನಿಗೆ--ನಾನು ನಿನ್ನ ಸೇವಕನೂ ನಿನ್ನ ಮಗನೂ ಆಗಿದ್ದೇನೆ; ನನಗೆ ವಿರೋಧವಾಗಿ ಎದ್ದ ಅರಾಮ್ಯರ ಅರಸನ ಕೈಗೂ ಇಸ್ರಾಯೇಲಿನ ಅರಸನ ಕೈಗೂ ನನ್ನನ್ನು ತಪ್ಪಿಸಿ ರಕ್ಷಿಸುವ ಹಾಗೆ ಬರ ಹೇಳು ಅಂದನು.
2 ಅರಸುಗಳು 16 : 8 (KNV)
ಇದಲ್ಲದೆ ಆಹಾಜನು ಕರ್ತನ ಮನೆಯಲ್ಲಿಯೂ ಅರಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಬೆಳ್ಳಿ ಬಂಗಾರವನ್ನು ತಕ್ಕೊಂಡು ಕಾಣಿಕೆಯಾಗಿ ಅಶ್ಶೂರಿನ ಅರಸನಿಗೆ ಕಳುಹಿ ಸಿದನು.
2 ಅರಸುಗಳು 16 : 9 (KNV)
ಆಗ ಅಶ್ಶೂರಿನ ಅರಸನು ಅವನ ಮಾತು ಕೇಳಿ ದಮಸ್ಕಕ್ಕೆ ಹೋಗಿ ಅದನ್ನು ಹಿಡಿದು ಅದರ ನಿವಾಸಿಗಳನ್ನು ಕೀರ್‌ ಪ್ರಾಂತಕ್ಕೆ ಸೆರೆಯಾಗಿ ತಂದು ರೆಚೀನನನ್ನು ಕೊಂದುಹಾಕಿದನು.
2 ಅರಸುಗಳು 16 : 10 (KNV)
ಅರಸನಾದ ಆಹಾಜನು ಅಶ್ಶೂರಿನ ಅರಸನಾದ ತಿಗ್ಲತ್ಪಿಲೇಸೆರನನ್ನು ಎದುರುಗೊಳ್ಳಲು ದಮಸ್ಕಕ್ಕೆ ಹೋಗಿ ಅಲ್ಲಿ ಒಂದು ಬಲಿಪೀಠವನ್ನು ಕಂಡನು. ಆಗ ಅರಸ ನಾದ ಆಹಾಜನು ಆ ಬಲಿಪೀಠದ ರೂಪವನ್ನೂ ಅದರ ಎಲ್ಲಾ ಕೈ ಕೆಲಸದ ಪ್ರಕಾರ ಮಾದರಿಯನ್ನೂ ಯಾಜಕನಾದ ಊರೀಯನಿಗೆ ಕಳುಹಿಸಿದನು.
2 ಅರಸುಗಳು 16 : 11 (KNV)
ಆಗ ಯಾಜಕನಾದ ಊರೀಯನು ಅರಸನಾದ ಆಹಾಜನು ದಮಸ್ಕದಿಂದ ಕಳುಹಿಸಿದ ಪ್ರಕಾರವೇ ಒಂದು ಬಲಿ ಪೀಠವನ್ನು ಕಟ್ಟಿಸಿದನು; ಹಾಗೆಯೇ ಅರಸನಾದ ಆಹಾಜನು ದಮಸ್ಕದಿಂದ ಬಂದಾಗ ಯಾಜಕನಾದ ಊರೀಯನು ಅದನ್ನು ಮಾಡಿಸಿದನು.
2 ಅರಸುಗಳು 16 : 12 (KNV)
ಅರಸನು ದಮಸ್ಕದಿಂದ ಬಂದ ಮೇಲೆ ಬಲಿಪೀಠವನ್ನು ನೋಡಿ ಬಲಿಪೀಠದ ಬಳಿಗೆ ಹೋಗಿ ಅದರ ಮೇಲೆ ಬಲಿ ಯನ್ನರ್ಪಿಸಿದನು.
2 ಅರಸುಗಳು 16 : 13 (KNV)
ಬಲಿಪೀಠದ ಮೇಲೆ ತನ್ನ ದಹನ ಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಸುಟ್ಟು ತನ್ನ ಪಾನಗಳನ್ನು ಹೊಯಿದನು. ಸಮಾಧಾನದ ಬಲಿ ಗಳ ರಕ್ತವನ್ನು ಚಿಮಿಕಿಸಿದನು.
2 ಅರಸುಗಳು 16 : 14 (KNV)
ಆದರೆ ಕರ್ತನ ಸಮ್ಮುಖದಲ್ಲಿದ್ದ ಹಿತ್ತಾಳೆಯ ಬಲಿಪೀಠವನ್ನು ಅವನು ಮನೆಯ ಮುಂಭಾಗದಿಂದಲೂ ಕರ್ತನ ಮನೆಗೂ ಬಲಿಪೀಠಕ್ಕೂ ಮಧ್ಯದಿಂದಲೂ ತಂದು ಅದನ್ನು ಈ ಬಲಿಪೀಠಕ್ಕೆ ಉತ್ತರ ಪಾರ್ಶ್ವದಲ್ಲಿ ಇಟ್ಟನು.
2 ಅರಸುಗಳು 16 : 15 (KNV)
ಇದಲ್ಲದೆ ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ --ಉದಯದಲ್ಲಿ ದಹನಬಲಿಯನ್ನೂ ಸಾಯಂಕಾಲದ ಆಹಾರ ಸಮರ್ಪಣೆಯನ್ನೂ ಅರಸನ ದಹನಬಲಿ ಯನ್ನೂ ಆಹಾರ ಅರ್ಪಣೆಯನ್ನೂ ದೇಶದ ಜನರೆಲ್ಲರ ದಹನಬಲಿಯನ್ನೂ ಅವರ ಆಹಾರ ಸಮರ್ಪಣೆ ಯನ್ನೂ ಪಾನಗಳನ್ನೂ ದೊಡ್ಡ ಬಲಿಪೀಠದ ಮೇಲೆ ಸುಟ್ಟು ದಹನಬಲಿಯ ರಕ್ತವೆಲ್ಲವನ್ನೂ ಬಲಿಯ ರಕ್ತವೆಲ್ಲವನ್ನೂ ಚಿಮಿಕಿಸು; ಆದರೆ ಹಿತ್ತಾಳೆ ಬಲಿಪೀಠವು ನಾನು ವಿಚಾರಿಸುವ ನಿಮಿತ್ತವಾಗಿ ಇರಲಿ ಎಂದು ಆಜ್ಞಾಪಿಸಿದನು.
2 ಅರಸುಗಳು 16 : 16 (KNV)
ಅರಸನಾದ ಆಹಾಜನು ಆಜ್ಞಾಪಿಸಿದ ಪ್ರಕಾರವೇ ಯಾಜಕನಾದ ಊರೀಯನು ಮಾಡಿದನು.
2 ಅರಸುಗಳು 16 : 17 (KNV)
ಇದ ಲ್ಲದೆ ಅರಸನಾದ ಆಹಾಜನು ಆಧಾರದ ಅಂಚುಗಳನ್ನು ಕೊಯ್ದು ಗಂಗಾಳವನ್ನು ಅದರ ಮೇಲಿನಿಂದ ತೆಗೆದು ಸಮುದ್ರ ಎಂಬ ಪಾತ್ರೆಯನ್ನು ಅದರ ಕೆಳಗಿರುವ ತಾಮ್ರದ ಎತ್ತುಗಳ ಮೇಲಿನಿಂದ ಇಳಿಸಿ ಅದನ್ನು ಕಲ್ಲುಗಳ ಕಟ್ಟೆಯ ಮೇಲೆ ಇಟ್ಟನು.
2 ಅರಸುಗಳು 16 : 18 (KNV)
ಇದಲ್ಲದೆ ಮನೆಯಲ್ಲಿ ಅವರು ಕಟ್ಟಿಸಿದ ಸಬ್ಬತ್ತಿಗೋಸ್ಕರ ಇದ್ದ ಒಪ್ಪಾರನ್ನೂ ಹೊರಗಿದ್ದ ಅರಸನ ಪ್ರವೇಶವನ್ನೂ ಅಶ್ಶೂರಿನ ಅರಸನ ನಿಮಿತ್ತವಾಗಿ ಕರ್ತನ ಮನೆಯಿಂದ ತಿರುಗಿಸಿದನು.
2 ಅರಸುಗಳು 16 : 19 (KNV)
ಆದರೆ ಆಹಾಜನು ಮಾಡಿದ ಇತರ ಕ್ರಿಯೆಗಳು ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?ಆಹಾಜನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಹಿಜ್ಕೀಯನು ಅವ ನಿಗೆ ಬದಲಾಗಿ ಅರಸನಾದನು.
2 ಅರಸುಗಳು 16 : 20 (KNV)
ಆಹಾಜನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಹಿಜ್ಕೀಯನು ಅವ ನಿಗೆ ಬದಲಾಗಿ ಅರಸನಾದನು.

1 2 3 4 5 6 7 8 9 10 11 12 13 14 15 16 17 18 19 20

BG:

Opacity:

Color:


Size:


Font: